ಬಿಗ್ ಬಾಸ್ ಕನ್ನಡ ಸೀಸನ್ 5 : ಸುದೀಪ್ ಎದುರು ಗೊಳೋ ಅಂದು ಅತ್ತ ಸಂಯುಕ್ತ ಹೆಗ್ಡೆ | Filmibeat Kannada

2017-12-19 4,372

Bigg Boss Kannada 5: Week 9: When Samyuktha Hegde started arguing with Sudeep, he starts removing his coat. Samyuktha feels insulted when contestants started laughing. She starts crying in front of Sudeep.


'ಬಿಗ್ ಬಾಸ್ ಕನ್ನಡ-5' ಕಾರ್ಯಕ್ರಮಕ್ಕೆ ನಟಿ ಸಂಯುಕ್ತ ಎಂಟ್ರಿ ಕೊಟ್ಟು ಒಂದು ವಾರ ಕಳೆದಿದೆ ಅಷ್ಟೆ. ಅಷ್ಟು ಬೇಗ, 'ಬಿಗ್ ಬಾಸ್' ಮನೆಯಲ್ಲಿ ಕಿರಿಕ್ ಮೇಲೆ ಕಿರಿಕ್ ಮಾಡಿಕೊಂಡಿರುವ 'ಕು'ಖ್ಯಾತಿ ಸಂಯುಕ್ತ ಹೆಗ್ಡೆ ರವರದ್ದು. 'ಬಿಗ್ ಬಾಸ್' ಮನೆಯೊಳಗೆ ಕಾಲಿಡುತ್ತಿದ್ದಂತೆಯೇ, ಎಲ್ಲರ ಬಗ್ಗೆ ಕಾಮೆಂಟ್ ಮಾಡಿದ ಸಂಯುಕ್ತ ವಾದ-ವಿವಾದ-ವಾಕ್ಸಮರಕ್ಕೆ ನಾಂದಿ ಹಾಡಿದರು. ಬರೀ ಸ್ಪರ್ಧಿಗಳ ಮುಂದೆ ಮಾತ್ರ ಅಲ್ಲ. ಕಿಚ್ಚ ಸುದೀಪ್ ಎದುರಿಗೂ ವಾದಕ್ಕೆ ಇಳಿದ ನಟಿ ಸಂಯುಕ್ತ, ಅದೇ ಸುದೀಪ್ ಎದುರಿಗೆ ಗೊಳೋ ಎಂದು ಕಣ್ಣೀರಿಟ್ಟರು. ಅದು ಕಿಚ್ಚ ಕೊಟ್ಟ ಒಂದೇ ಒಂದು ಚಮಕ್ ಗೆ.! 'ತಾವು ಹೇಳಿದ್ದೇ ಸರಿ, ತಮಗೆ ಅನಿಸಿದ್ದೇ ಸರಿ' ಎಂಬಂತೆ ವಾದ ಮಾಡುವ ಸಂಯುಕ್ತ ಕಣ್ಣೀರಿಟ್ಟಿದ್ದು ಯಾಕೆ.? 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಏನಾಯ್ತು.? ಎಂಬುದರ ಸಂಪೂರ್ಣ ವಿವರ ಇಲ್ಲಿದೆ.

Videos similaires